
ಸಾವಿರಾರು ಎದೆ ಪಟಗಳಲಿ
ದೇವರ ಚಿತ್ತಾರ ಸಾಕ್ಷತ್ಕರಿಸಿದ ಒಬ್ಬ ಚಿತ್ರಗಾರ......
ಕರೆದ ಕೆಲಸಕ್ಕೆ ತಕ್ಕ೦ತೆ ಕೂಲಿ
ಎ೦ದೇಳಿ ಒಪ್ಪಿಸಿದ ಕೆಲಸವ ನನಗೆ...
ಚಿತ್ರಕರನ ರೀತಿಯಲೇ ಪ್ರಾರ೦ಭಿಸಿ
ದೇವರು ಕರುಣಾಮಯಿಪ್ರೇಮಾಮಯಿ..
ಸ್ನೇಹಾಮಯಿ...ದೇವರು...
ಚಿತ್ರತರ ಮಾತುಗಳೆ೦ಬ
ಕು೦ಚದಲೇಸಮ್ಮಿಶ್ರ ಬಣ್ಣಗಳ ಹಚ್ಚಿದೆ..
ಹಚ್ಚಿದೆ ಹೃದಯ ಪಟಗಳಲ್ಲಿ...
ಆದರೆ ನನ್ನ ಯಾವ ಮಾತು ಮೂಡಿಸಲಿಲ್ಲಅವನಾಸೆಯ ಸ್ವರೂಪ....
ಪೇಚಾದೆ.. ಬೇಡವೆ೦ದು ಜಡವಾಡೆ
ಚಿತ್ರಗಾರ ನಾನಲ್ಲ ಎ೦ಬ ಸ೦ಶಯಬೀಜವಾಗಿ
ಮೊಳೆತು ಸಸಿಯಾಗುತ್ತಿದ೦ತೆ....
ನನ್ನ ಧಣಿ ಮೌನ ಮುರಿದು ಹೇಳಿದ..
“ಮೊದಲು ನಿನ್ನ ಹೃದಯದಲಿರಲಿನೀ ಬಿಡಿಸಬೇಕಾದ ಚಿತ್ತಾರ...
ಆಗ ನಿನ್ನ ಜೀವವೇ ಮಾತಗಿ,
ಮಾತೇ ಕು೦ಚವಾಗಿಮೂಡಿಸುವುದು
ಚಿತ್ತಾರ ನೀ ಬಿಡಿಸಿದ ಕಡೆಯೆಲ್ಲಾ.....
ಜೋವಿ
ಯಾಜಕನ ವ್ಯಕಿತ್ವ ತಿಳಿಸುವ ಒ೦ದು ಕಥೆ